ನಜೀರ್
1736-1830. ಒಬ್ಬ ಮುಸಲ್ಮಾನ ಸಂತಕವಿ. ಹುಟ್ಟು ಹೆಸರು ವಲೀ ಮಹಮ್ಮದ್. ಹುಟ್ಟಿದ್ದು ಆಗ್ರಾದಲ್ಲಿ. ತಂದೆ ಮಹಮ್ಮದ್ ಫರೂಖ್ ದೆಹಲಿಯ ಶ್ರೀಮಂತರ ಪೈಕಿ ಒಬ್ಬ. 1769ರಲ್ಲಿ ಆಗ್ರಾಪಟ್ಟಣ ಲೂಟಿಗೆ ಒಳಗಾದಾಗ ನಜೀರ್ ತನ್ನ ಸರ್ವಸ್ವವನ್ನೂ ಕಳೆದುಕೊಂಡ. ಪಾರಸಿ, ಹಿಂದಿ ಮತ್ತು ಖಡಿಬೋಲಿಯಲ್ಲಿ ಪಳಗಿದ್ದ ಈತ ಮುಸಲ್ಮಾನನಾದರೂ ಕೃಷ್ಣಭಕ್ತನಾಗಿದ್ದ. ಕೃಷ್ಣಲೀಲೆಯನ್ನು ಕುರಿತ ಈತನ ಅನೇಕ ಪದಗಳು ಮತ್ತು ರಚನೆಗಳು ಹೆಸರುವಾಸಿಯಾಗಿದೆ. ಹಿಂದೂ-ಮುಸಲ್ಮಾನರ ಮೈತ್ರಿಯನ್ನು ಈತ ತನ್ನ ರಚನೆಗಳಲ್ಲಿ ಸಾರಿದ್ದಾನೆ. ಆಗ್ರಾದಲ್ಲಿ ಪ್ರತಿವರ್ಷ ಹೋಳಿಹಬ್ಬದ ಕಾಲದಲ್ಲಿ ಈತನ ದರ್ಗಾದ ಮುಂದೆ ಉರ್ಸ-ಜಾತ್ರೆ ನಡೆಯುತ್ತದೆ.									(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ